ಕರ್ನಾಟಕದಲ್ಲಿ 1ನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ವಯಸ್ಸಿನ ನಿಯಮದಿಂದ ಇದೀಗ ಮತ್ತೊಂದು ಸಂಘರ್ಷ ಉಂಟಾಗಿದೆ. ಪೋಷಕರ ಒತ್ತಾಯದಿಂದ ಈ ವರ್ಷ 5.5 ವರ್ಷಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ ಖಾಸಗಿ ಶಾಲೆಗಳ ಒಕ್ಕೂಟ ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ವಿರುದ್ಧ ಕೋರ್ಟ್ ಮೆಟಿಲ್ಲೇರಲು ಮುಂದಾಗಿವೆ.
ಮುಂದಿನ ವರ್ಷ ಕಡ್ಡಾಯ 6 ವರ್ಷ ಒಂದನೇ ತರಗತಿ ದಾಖಲಾತಿಗೆ ತುಂಬಿರಬೇಕು ಅಂತಾ ಹೇಳಿದೆ. ಆದರೆ ಇದು ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳು ಗೊಂದಲಕ್ಕೆ ಕಾರಣವಾಗಿದೆ. ಕಳೆದ ವರ್ಷ ಸಿಬಿಎಸ್ಇ ಬೋರ್ಡ್ ಒಂದನೇ ತರಗತಿ ದಾಖಲಾತಿಗೆ ಕಡ್ಡಾಯ 6 ವರ್ಷ ತುಂಬಿರಬೇಕು ಅಂತಾ ಆದೇಶ ನೀಡಿತ್ತು. ಆದರೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಈ ವರ್ಷಕ್ಕೆ ಸಿಮೀತಗೊಳಸಿ 5.5 ಕ್ಕೆ ವಯೋಮಿತಿ ಇಳಿಕೆ ಮಾಡಿದೆ. ಸಿಬಿಎಸ್ಇ ಬೋರ್ಡ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಹೀಗಾಗಿ ಸಿಬಿಎಸ್ಇ ಶಾಲೆಗಳಿಗೆ ಒಂದನೇ ತರಗತಿಯ ದಾಖಲಾತಿಯ ಗೊಂದಲ ಕೇಳಿ ಬಂದಿದೆ. ಮತ್ತೊಂದಡೆ 1 ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಲಿಕೆ ವಿರೋಧಿಸಿ ಕೋರ್ಟ್ ಮೆಟ್ಟಿಲೇರಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ. ಸರ್ಕಾರದ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಇದನ್ನು ಓದಿ: ಆರ್ ಟಿ ಇ | ಉಚಿತ ಶಿಕ್ಷಣ | ಸಂಪೂರ್ಣ ಮಾಹಿತಿ ಇಲ್ಲಿದೆ
ಕೋರ್ಟ್ ಮೊರೆ ಹೋಗಲು ಮುಂದಾದ ಖಾಸಗಿ ಶಾಲೆಗಳ ಒಕ್ಕೂಟ
ಕೆಲವು ಖಾಸಗಿ ಶಾಲೆಗಳು ಸರ್ಕಾರದ ಈ ಹಿಂದೆ ವಯೋಮಿತಿ ವಿಚಾರಕ್ಕೆ ನೀಡಿರುವ ಆದೇಶವನ್ನ ಫಾಲೋ ಮಾಡಿದ್ದೀವಿ. ಇದರ ಪ್ರಕಾರವೇ ದಾಖಲಾತಿ ಕೂಡಾ ಮಾಡಿಸಿಕೊಳ್ಳಲಾಗಿದೆ. ಆದರೆ ಸರ್ಕಾರ ಈಗ ಏಕಾಏಕಿ ಈ ನಿರ್ಧಾರಕ್ಕೆ ಬಂದಿರೋದಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ. ಮುಂದಿನ ವರ್ಷಕ್ಕೂ ವಯೋಮಿತಿ ಸಡಲಿಕೆ ನೀಡಬೇಕಾದ ಅವಶ್ಯಕತೆ ಎದುರಾಗಿದೆ ಅಂತಾ ಕೋರ್ಟ್ ಮೊರೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಮುಂದಾಗಿದೆ.
ಈ ರೀತಿಯ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ಸರ್ಕಾರಿ ಯೋಜನೆಗಳ ವಾಟ್ಸಪ್ ಚಾನೆಲ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ
ಸರ್ಕಾರ ಈ ವರ್ಷ ಮಾತ್ರ 5.5 ವಯೋಮಿತಿ ಸಡಲಿಕೆ ಮಾಡಿದೆ. ಜೊತೆಗೆ ಯುಕೆಜಿ ಕಂಪ್ಲೀಟ್ ಮಾಡಿರಬೇಕು ಅಂತಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಫಾಲನೇ ಮಾಡಿಕೊಂಡೇ ಎಲ್ಕೆಜಿ ಶಾಲೆಗೆ ದಾಖಲಾದ ಮಕ್ಕಳ ಸ್ಥಿತಿ ಏನು ಅಂತಾ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ಹೊರ ಹಾಕಿದ್ದಾರೆ. ದೇಶದಲ್ಲಿ ಈಗಾಗಲೇ ಎಲ್ಲಡೆ 1 ನೇ ತರಗತಿಯ ದಾಖಲಾತಿಗೆ 6 ವರ್ಷ ಪೂರ್ಣಗೊಂಡಿರಬೇಕು ಅಂತಾ ಇದೆ. ರಾಜ್ಯದಲ್ಲಿ ಹೊಸ ರೂಲ್ಸ್ ತಂದರೆ ಸಮಸ್ಯೆಯಾಗುತ್ತೆ ಅಂತೀರೊ ಖಾಸಗಿ ಶಾಲೆಗಳು, ಆದ್ರೆ ಪೋಷಕರ ಒಕ್ಕೂಟ ಮಾತ್ರ ನಾವು ಸರ್ಕಾರದ ಪರ ಇದ್ದೇವೆ. ಕೋರ್ಟ್ಗೆ ಸರ್ಕಾರದ ಪರದ ನಾವು ಹೋಗ್ತೀವಿ ಅಂತಿದ್ದಾರೆ.
ಮಹರಾಷ್ಟ್ರ ಸರ್ಕಾರವೂ ನಿನ್ನೆ ಒಂದನೇ ತರಗತಿಗೆ 6 ವರ್ಷ ಕಡ್ಡಾಯ ಅಂತಾ ಆದೇಶ ನೀಡಿದೆ. ಇದರಿಂದ ಮಹರಾಷ್ಟ್ರಕ್ಕೆ ಟ್ರಾನ್ಸಫರ್ ಆಗುವ ವಿದ್ಯಾರ್ಥಿ ಹಾಗೂ ಪೋಷಕರಿಗೂ ಸಮಸ್ಯೆಯಾಗುವ ಸಾಧ್ಯತೆ ಎದುರಾಗಿದೆ.
ಕೃಪೆ: tv9kannada