ಇ-ಶ್ರಮ್‌ ಯೋಜನೆಯಿಂದ ಏನೆಲ್ಲ ಲಾಭ? ಹೆಸರು ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

 

ಇ-ಶ್ರಮ್‌ ಯೋಜನೆಯಿಂದ ಏನೆಲ್ಲ ಲಾಭ? ಹೆಸರು ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

ನೋಂದಣಿಯಿಂದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆ ಪಡೆಯಬಹುದಾಗಿದೆ.1 ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾಬಿಮಾ ಯೋಜನೆ ಪ್ರಯೋಜನ (ಅಪಘಾತದಿಂದ ಮರಣ ಹೊಂದಿದ್ದಲ್ಲಿಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ರೂ. 2 ಲಕ್ಷ ಹಾಗೂ ಭಾಗಶ: ಅಂಗವಿಕಲತೆ ಹೊಂದಿದ್ದಲ್ಲಿ 1 ಲಕ್ಷ ಪಡೆಯಬಹುದಾಗಿದೆ)

ಯೋಜನೆ ವ್ಯಾಪ್ತಿಗೆ ಯಾರೆಲ್ಲ ಅರ್ಹ?

ಇ-ಶ್ರಮ್‌ ಯೋಜನೆಯಡಿ ನೋಂದಣಿಗೆ ಕಟ್ಟಡ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರು, ಮೀನುಗಾರರು, ಕೃಷಿ ಸಂಗೋಪನಾಕಾರರು, ನೇಕಾರರು, ಬಡಗಿಗಳು, ಆಶಾ ಕಾರ್ಯಕರ್ತೆಯರು, ಛಾಯಾಚಿತ್ರಗ್ರಾಹಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಮನೆಕೆಲಸದವರು, ಪತ್ರಿಕೆ ಮಾರಾಟಗಾರರು, ನರೇಗಾ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಅಂಗಡಿ ವ್ಯಾಪಾರಸ್ತರು, ಚರ್ಮ ಕೈಗಾರಿಕಾ ಕಾರ್ಮಿಕರು, ಆನ್‌ಲೈನ್‌ ಸೇವಾ ಕಾರ್ಮಿಕರು, ಟೈಲರ್‌ಗಳು, ಹೋಟೆಲ್‌, ಬೇಕರಿ ಕಾರ್ಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಒಟ್ಟಾರೆ 156 ವರ್ಗಗಳ 16-59 ವರ್ಷದೊಳಗಿನವರು ನೋಂದಾಯಿಸಿಕೊಳ್ಳಬಹುದು


ಏನಿದು e-Shram ಪೋರ್ಟಲ್?

ಕಟ್ಟಡ ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಮನೆಗೆಲಸದವರು, ರಸ್ತೆಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯದ 38 ಕೋಟಿ ಕಾರ್ಮಿಕರ ನೋಂದಣಿ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ಕಾರಣಕ್ಕೆ ಇ-ಶ್ರಮ ಪೋರ್ಟಲ್ ಪ್ರಾರಂಭಿಸಿದ್ದು, ಇದರಲ್ಲಿ ಕಾರ್ಮಿಕರು ತಮ್ಮ ಹೆಸರು ಮತ್ತು ಮಾಹಿತಿ ನೋಂದಾಯಿಸಬಹುದು. ಹೀಗೆ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ವಿಶಿಷ್ಟ ಗುರುತು ಸಂಖ್ಯೆ ಹೊಂದಿರೋ ಇ-ಶ್ರಮ ಕಾರ್ಡ್ ನೀಡಲಾಗುತ್ತದೆ.


ಇ-ಶ್ರಮ ಕಾರ್ಡ್

ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ 12 ಅಂಕಿಗಳ ವಿಶಿಷ್ಟ ಗುರುತಿನ ಇ-ಶ್ರಮ ಕಾರ್ಡ್ ನೀಡಲಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕರಿಗೆ ಈ ಕಾರ್ಡ್ ನೆರವು ನೀಡಲಿದೆ. ಇದು ಜೀವಿತಾವಧಿ ವ್ಯಾಲಿಡಿಟಿ ಹೊಂದಿದೆ. ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಇದೊಂದೇ ಕಾರ್ಡ್ ಸಾಕು.


ಯಾರು ಹೆಸರು ನೋಂದಾಯಿಸಬಹುದು? 

16 ರಿಂದ 59 ವಯಸ್ಸಿನ ಕಟ್ಟಡ ನಿರ್ಮಾಣ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು. 


ಯಾವೆಲ್ಲ ದಾಖಲೆಗಳು ಅಗತ್ಯ?

ಹೆಸರು, ಉದ್ಯೋಗ, ಕಾಯಂ ವಿಳಾಸ, ವಿದ್ಯಾರ್ಹತೆ, ಕೌಶಲ್ಯ ಹಾಗೂ ಅನುಭವದ ಮಾಹಿತಿ, ಕುಟುಂಬ ಸದಸ್ಯರ ಮಾಹಿತಿ, ಆಧಾರ್ ಸಂಖ್ಯೆ, ಆಧಾರ್ ಸಂಖ್ಯೆಗೆ ಜೋಡಣೆಯಾಗಿರೋ ಮೊಬೈಲ್ ನಂಬ್ರ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್ಸಿ ಕೋಡ್ ಮಾಹಿತಿಗಳಿಗೆ ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು. 


ಪ್ರಯೋಜನಗಳೇನು?

-ನೋಂದಾಯಿತ ಕಾರ್ಮಿಕರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ 2 ಲಕ್ಷ ರೂ. ಅಪಘಾತ ವಿಮಾ ಕವರೇಜ್ ಪಡೆಯುತ್ತಾರೆ. ಕಾರ್ಮಿಕ ಆಕಸ್ಮಿಕವಾಗಿ ಮರಣ ಹೊಂದಿದ್ರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದ್ರೆ 2 ಲಕ್ಷ ರೂ. ಸಿಗಲಿದೆ. 

-ಅಸಂಘಟಿತ ಕಾರ್ಮಿಕರಿಗೆ ಲಭ್ಯವಿರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯಲು ನೋಂದಾಯಿತ ಕಾರ್ಮಿಕ ಅರ್ಹನಾಗಿದ್ದಾನೆ. 

-ತುರ್ತು ಸಂದರ್ಭ ಹಾಗೂ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಇ-ಶ್ರಮ ಕಾರ್ಡ್ ಹೊಂದಿರೋರು ಎಲ್ಲ ರೀತಿಯ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ. 


ಕೆಳಕಂಡ ಎಲ್ಲಾ ಸೇವೆಗಳು ಲಭ್ಯವಿದೆ 1.ಜಾತಿ ಮತ್ತು ಆದಾಯ ಪ್ರಮಾಣ ಪತ್ರ

2.ಅಲ್ಪಸಂಖ್ಯಾತರ ಪ್ರಮಾಣ ಪತ್ರ

3.ವಾಸಸ್ಥಳ ದೃಢೀಕರಣ ಪತ್ರ

4.ನಿವಾಸ ಸ್ಥಳ ದೃಢೀಕರಣ ಪತ್ರ

5.ವೃದ್ಧಾಪ್ಯ ವೇತನ

6.ವಿಧವಾ ವೇತನ

7.ಜನನ ಪ್ರಮಾಣ ಪತ್ರ

8.ಮರಣ ಪ್ರಮಾಣ ಪತ್ರ

9.ಮದುವೆ ಪ್ರಮಾಣ ಪತ್ರ

10.ಪ್ಯಾನ್ ಕಾರ್ಡ್ ಸೇವೆಗಳು

11.ಪಾಸ್ಪೋರ್ಟ್ ಸೇವೆಗಳು

12.ಪಿಎಫ್ ಸೇವೆಗಳು

13.ಇ ಸ್ಟ್ಯಾಂಪ್ ಸೇವೆಗಳು

14.ಅಗ್ರೀಮೆಂಟ್ಸ್

15.ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್

16.ಖಾತ ಬದಲಾವಣೆ

17.ಖಾತ ನೊಂದಣಿ

18.ಎಂ ಎಸ್ ಎಂ ಈ|ಉದ್ಯೋಗ್ ಆಧಾರ್

19.ಕಾರ್ಮಿಕರ ಲೈಸೆನ್ಸ್

20.ಆಧಾರ್ ಸೇವೆಗಳು

21.ಎಲ್ಐಸಿ ಸೇವೆಗಳು

22.ಹಿರಿಯ ನಾಗರಿಕರ ಕಾರ್ಡ್

23ಎಲೆಕ್ಟ್ರಿಕಲ್ ಮೀಟರ್ ಟ್ರಾನ್ಸ್ಫರ್

24.ಜಿ ಎಸ್ ಟಿ ಸೇವೆಗಳು

25.ಆದಾಯ ಮತ್ತು ತೆರಿಗೆ ಸೇವೆಗಳು

26.ಬಿಬಿಎಂಪಿ ಸೇವೆಗಳು

27.ನಾಡಕಛೇರಿ ಸೇವೆಗಳು

28.ಕೊರಿಯರ್ ಸೇವೆಗಳು

29.ಆರ್ ಟಿ ಓ ಸೇವೆಗಳು

30.ರೇಶನ್ ಕಾರ್ಡ್ ಸೇವೆಗಳು

31.ಟ್ರೇಡ್ ಲೈಸೆನ್ಸ್

32.ಪಿವಿಸಿ ಕಾರ್ಡ್ ಪ್ರಿಂಟ್

33. ಇ-ಶ್ರಮ ಕಾರ್ಡ್

ಸರ್ಕಾರಿ ಯೋಜನೆಗಳ ವಾಟ್ಸಪ್ ಗ್ರೂಪ್ ಲಿಂಕ್ ಕ್ಲಿಕ್ ಮಾಡಿ 


ಸರ್ಕಾರಿ ಯೋಜನೆಗಳ ಟೆಲಿಗ್ರಾಂ ಗ್ರೂಪ್ ಲಿಂಕ್ ಕ್ಲಿಕ್ ಮಾಡಿ


ಸರ್ಕಾರಿ ಯೋಜನೆಗಳ ಫೇಸ್ಬುಕ್ ಲಿಂಕ್ ಕ್ಲಿಕ್ ಮಾಡಿ

Post a Comment

Previous Post Next Post