ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಪಡಿತರ ಚೀಟಿ ಪೋರ್ಟಲ್ ಮತ್ತೆ ಕಾರ್ಯಾರಂಭ

 

'ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಪಡಿತರ ಚೀಟಿ ಪೋರ್ಟಲ್ ಮತ್ತೆ ಕಾರ್ಯಾರಂಭ

ಬೆಂಗಳೂರು: ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಉಳಿದುಕೊಂಡಿದ್ದ ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂಜೂರು ಮಾಡಿದೆ.

2017 ರಿಂದ ಪಡಿತರ ಚೀಟಿ ಪೋರ್ಟಲ್ ಸ್ಥಗಿತವಾಗಿದ್ದು, ಮತ್ತೆ ಕಾರ್ಯಾರಂಭ ಮಾಡಿದೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಮರು ಚಾಲನೆಯ ನಂತರ ಹೊಸದಾಗಿ 2.76 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಮಂಜೂರು ಮಾಡಲಾಗಿದೆ.

ಅನರ್ಹರು ಕೂಡ ಬಿಪಿಎಲ್ ಪಡಿತರ ಚೀಟಿ ಪಡೆದು ವಂಚಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಆಹಾರ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಆಹಾರ ಇಲಾಖೆ ಕಚೇರಿ ಅಥವಾ ಉಪ ಕಚೇರಿಗಳಲ್ಲಿ ಸ್ವೀಕೃತಿ ಪತ್ರದೊಂದಿಗೆ ಹೊಸ ಕಾರಣಗಳನ್ನು ಪಡೆಯಬಹುದಾಗಿದೆ.

ಹೊಸದಾಗಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಮನೆಯ ಹಿರಿಯ ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಆಧಾರ್ ನಂಬರ್ ಮತ್ತು ಜಾತಿ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಇದರೊಂದಿಗೆ ಮೊಬೈಲ್ ನಂಬರ್ ಜೋಡಣೆಯಾದ ಆಧಾರ್ ಸಂಖ್ಯೆ ಮತ್ತು ಜನನ ಪ್ರಮಾಣ ಪತ್ರದೊಂದಿಗೆ 6 ವರ್ಷದೊಳಗಿನ ಮಕ್ಕಳನ್ನು ಸೇರ್ಪಡೆ ಮಾಡಲಾಗುವುದು.

ಹೊಸ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಲು ಸಂಪರ್ಕಿಸಿ 9916444424

ಸರ್ಕಾರಿ ಯೋಜನೆಗಳ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗೋಪಿಗೆ ನಿಮ್ಮ ಹೆಸರನ್ನು ನೋಂದಾಯಿಸಿ 9916444424

Post a Comment

Previous Post Next Post