ಕರ್ನಾಟಕ ರಾಜ್ಯದಾದ್ಯಂತ ಖಾಸಗಿ ಶಾಲೆಗಳು, ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಉಚಿತವಾಗಿ ಎಲ್‌ಕೆಜಿ / 1ನೇ ತರಗತಿಗೆ ಪ್ರವೇಶಾತಿ ಪಡೆಯುವ ಸಂಬಂಧ, ಪ್ರಸಕ್ತ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಉತ್ಸುಕರಾಗಿರುವ ಪೋಷಕರ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಅರ್ಹತೆಗಳೇನು, ಅರ್ಜಿ ಸ್ವೀಕಾರ ಯಾವಾಗ, ಬೇಕಾದ ದಾಖಲೆಗಳೇನು, ನೆರೆಹೊರೆ ಶಾಲೆ ಚೆಕ್ ಮಾಡುವುದು ಹೇಗೆ, ಇತರೆ ಮಾಹಿತಿಗಳನ್ನು ಇಲ್ಲಿ ತಿಳಿಯಿರಿ.
ಇದು ಮಾರ್ಚ್ ತಿಂಗಳು. ಈ ತಿಂಗಳ ಅಂತ್ಯದಲ್ಲೇ ಪ್ರಾಥಮಿಕ ಶಾಲೆಯಿಂದ -ಪಿಯುಸಿ ವರೆಗಿನ ಶೈಕ್ಷಣಿಕ ವರ್ಷ ಮುಕ್ತಾಯವಾಗಲಿದೆ. ಬಹುಸಂಖ್ಯಾತ ಪೋಷಕರು ತಮ್ಮ ಮಕ್ಕಳ ಮುಂದಿನ ತರಗತಿಯ ಪ್ರವೇಶದ ಬಗ್ಗೆ ಚಿಂತಿಸುವ ಸಮಯವಿದು. ಯಾವ ಶಾಲೆಗೆ ಪ್ರವೇಶ ಮಾಡಿಸಬೇಕು, ಎಷ್ಟು ಡೊನೇಷನ್ ಕಟ್ಟಲು ತಮಗೆ ಸಾಧ್ಯ, ಉಚಿತವಾಗಿ ಪ್ರವೇಶ ಪಡೆಯುವುದಾದರೆ ಎಲ್ಲಿ ಪಡೆಯುವುದು, ಹೀಗೆ ಹಲವು ಅಂಶಗಳನ್ನು ಆಲೋಚಿಸುವುದು.ಈ ಪ್ರವೇಶಾತಿ ವಿಷಯ ಬಂದಾಗ ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಉಚಿತವಾಗಿ ತಮ್ಮ ಮಕ್ಕಳನ್ನು ಎಲ್‌ಕೆಜಿ / 1ನೇ ತರಗತಿಗೆ ಪ್ರವೇಶ ಮಾಡಿಸಲು ಇರುವ ಒಂದೇ ಒಂದು ಮಾರ್ಗ ಎಂದರೆ ಅದು ಶಿಕ್ಷಣ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವುದು. ಈ ಬಗ್ಗೆ ಈಗಾಗಲೇ ಹಲವು ಪೋಷಕರು ಮಾಹಿತಿಗಳನ್ನು ಕಲೆಹಾಕಿ, ಅರ್ಜಿ ಸಲ್ಲಿಸಲು ಸಿದ್ಧತೆಯನ್ನು ಸಹ ನಡೆಸಿಕೊಳ್ಳುತ್ತಿದ್ದಾರೆ.
ಹಾಗಿದ್ರೆ ಕರ್ನಾಟಕದಲ್ಲಿ ಖಾಸಗಿ ಶಾಲೆಗಳಲ್ಲಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವುದು ಯಾವಾಗ? ಅರ್ಹತೆಗಳು ಏನು? ಶಾಲೆಗಳನ್ನು ಚೆಕ್ ಮಾಡುವ ಸುಲಭ ವಿಧಾನ ಯಾವುದು? ವಯಸ್ಸಿನ ಅರ್ಹತೆಗಳು ಏನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ ನೋಡಿ.ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು 2025-26ನೇ ಸಾಲಿನ ಆರ್‌ಟಿಇ- ಶಿಕ್ಷಣ ಹಕ್ಕು ಕಾಯ್ದೆ ಅಡಿ ಉಚಿತವಾಗಿ ರಾಜ್ಯದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು 1ನೇ ತರಗತಿಯಿಂದ 8ನೇ ತರಗತಿವರೆಗೆ ಪ್ರವೇಶ ಪಡೆಯುವ ಸಂಬಂಧ, ಇದೀಗ ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಬಿಡುಗಡೆ ಮಾಡಿದೆ. ಪೋಷಕರು, ತಮ್ಮ ಮಕ್ಕಳ ಪರವಾಗಿ ಆರ್‌ಟಿಇ ಶಿಕ್ಷಣ ಪ್ರವೇಶಕ್ಕೆ ಮೇ 12 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಈ ಹಿಂದೆಯೇ ಶಿಕ್ಷಣ ಇಲಾಖೆ ಆರ್‌ಟಿಇ ಶಿಕ್ಷಣ ಪ್ರವೇಶಕ್ಕೆ ಸಂಬಂಧಿತ ಮಾರ್ಗಸೂಚಿಗಳನ್ನು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಅರ್ಜಿ ಲಿಂಕ್ ಅನ್ನು ಬಿಡುಗಡೆ ಮಾಡಿದೆ.
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 15-04-2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12-05-2025
2025-26ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ ಅಡಿ ದಾಖಲಾತಿಗೆ ನಿರೀಕ್ಷಿತ ಸಂಭಾವ್ಯ ವೇಳಾಪಟ್ಟಿ
ನೋಟಿಫಿಕೇಶನ್, ಅರ್ಜಿ ಸ್ವೀಕಾರ ದಿನಾಂಕಗಳು: ಮಾರ್ಚ್ ಅಂತ್ಯದೊಳಗೆ / ಏಪ್ರಿಲ್ ಮೊದಲ ವಾರ 2025.
ವಿಶೇಷ ಪ್ರವರ್ಗಗಳು / ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆ: ಮೇ 2025
ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸುವ ದಿನಾಂಕ: ಜೂನ್ 2025
ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ದಿನಾಂಕ: ಜೂನ್ 2025
ಶಾಲೆಗಳಲ್ಲಿ ದಾಖಲಾತಿ ಆರಂಭ ದಿನಾಂಕ: ಜೂನ್ 2025
ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರ ಬಿಡುಗಡೆ ದಿನಾಂಕ: ಜೂನ್ ಎರಡನೇ ವಾರ 2025
ಆನ್‌ಲೈನ್ ತಂತ್ರಾಂಶದ ಮೂಲಕ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ದಿನಾಂಕ: ಜೂನ್ ಮೂರನೇ ವಾರ 2025
2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ದಿನಾಂಕಗಳು: ಜೂನ್ ಕೊನೆ ವಾರದೊಳಗೆ -2025.
ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವ ದಿನಾಂಕ: ಜೂನ್ ಅಂತ್ಯದೊಳಗೆ -2025.
ಆರ್‌ಟಿಇ ಅಡಿ ಪ್ರವೇಶಕ್ಕೆ ಶಾಲೆಗಳನ್ನು ತಿಳಿಯುವುದು ಹೇಗೆ?
2025-26ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1) (ಬಿ) ಮತ್ತು 12 (1)(ಸಿ) ಅಡಿಯಲ್ಲಿ ಪ್ರವೇಶ ಪ್ರಕ್ರಿಯೆಗೆ ನೆರೆಹೊರೆಯ ಪ್ರದೇಶದ ಮಿತಿಯನ್ನು, ಶಾಲೆಗಳನ್ನು ಮ್ಯಾಪಿಂಗ್ ಮಾಡುವ ಕಾರ್ಯವನ್ನು ಜನವರಿ ಅಂತ್ಯದಲ್ಲಿಯೇ ಆರಂಭಿಸಲಾಗಿದೆ. 'RTE - ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ'ಯನ್ನು ಅರ್ಜಿಗೆ ನೋಟಿಫಿಕೇಶನ್ ಬಿಡುಗಡೆ ಮಾಡುವ ವೇಳೆಗೆ ಪ್ರಕಟಿಸಲಾಗುತ್ತದೆ.
ಎಲ್‌ಕೆಜಿ / 1ನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಅರ್ಹತೆ ಎಷ್ಟಿರಬೇಕು?ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಸರ್ಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಪ್ರಾರಂಭಿಕ ತರಗತಿಗಳಿಗೆ ಮಕ್ಕಳ ಪ್ರವೇಶಕ್ಕೂ ವಯಸ್ಸು ನಿಗದಿಪಡಿಸಲಾಗಿದೆ.
ಎಲ್‌ಕೆಜಿ ಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 4 ವರ್ಷ ಆಗಿರಬೇಕು.
1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಮಾಹಿತಿಗಳು ಏನು?
ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟಿಗಾಗಿ ಪ್ರವೇಶ ಕೋರುವವರಿಗೆ ಬೇಕಾದ ದಾಖಲೆಗಳೆಂದರೆ..
ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್.
ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಕಡ್ಡಾಯ.
ವಾಸಸ್ಥಳ ದೃಢೀಕರಣ ಪ್ರಮಾಣಪತ್ರ
ಮೊಬೈಲ್ ನಂಬರ್
ಇಮೇಲ್ ವಿಳಾಸ
RTE ಅಪ್ಲಿಕೇಶನ್ ಹಾಕಲು ಸಂಪರ್ಕಿಸಿ 9916444424
ಈ ರೀತಿಯ ಸರ್ಕಾರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು ಸರ್ಕಾರಿ ಯೋಜನೆಗಳ ವಾಟ್ಸಪ್ ಚಾನೆಲ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ