EPFO ಚಂದಾದಾರರಿಗೆ ಸಿಗಲಿದೆ ಈ 7 ಪ್ರಯೋಜನ, ತಿಳಿಯಲೇಬೇಕಾದ ಮಾಹಿತಿ ಇದು


click the image to apply
EPF Benefits : ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಖಾತೆ ಹೊಂದಿರುವವರಿಗೆ ಹಲವಾರು ಆರ್ಥಿಕ ಪ್ರಯೋಜನಗಳಿವೆ. ಆದರೆ, ಬಹುತೇಕರಿಗೆ ಇದರ ಅರಿವೇ ಇರುವುದಿಲ್ಲ. ಈ ಲೇಖನದಲ್ಲಿ ಪಿಎಫ್‌ ಖಾತದಾರರಿಗೆ ಇರುವ 7 ಆರ್ಥಿಕ ಅನುಕೂಲಗಳ ಮಾಹಿತಿ ಇದೆ.

EPF Benefits: ಎಲ್ಲ ಕಂಪನಿಗಳು ಕೂಡ ತಮ್ಮ ನೌಕರರ ವೇತನದಲ್ಲಿ ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡುತ್ತವೆ. ಏಕೆಂದರೆ, ಕೆಲಸಕ್ಕೆ ಸೇರುವಾಗಲೇ ಉದ್ಯೋಗಿಯು ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ಚಂದಾದಾರರಾಗಿರುತ್ತಾರೆ. ಹೀಗಾಗಿ ಉದ್ಯೋಗಿಯ ಮಾಸಿಕ ವೇತನದಿಂದ ಇಂತಿಷ್ಟು ಹಣವನ್ನು ಕಡಿತ ಮಾಡಿ ಪಿಎಫ್‌ ಖಾತೆಗೆ ಜಮೆ ಮಾಡಲಾಗುತ್ತದೆ. ಪಿಎಫ್‌ ಖಾತೆಗೆ ಉದ್ಯೋಗಿ ಮತ್ತು ಉದ್ಯೋಗದಾತ ಕಂಪನಿ ಇಬ್ಬರೂ ಪ್ರತಿ ತಿಂಗಳು ಕೊಡುಗೆ ನೀಡುತ್ತಾರೆ.

ಸಂಘಟಿತ ವಲಯದ ಉದ್ಯೋಗಿಗಳಿಗೆ ಶೇ.12 ರಷ್ಟು ವೇತನ ಹಣವನ್ನು ಕಡಿತಗೊಳಿಸುವ ಮೂಲಕ ಪ್ರತಿ ತಿಂಗಳು ಪಿಂಚಣಿ ಕಾರ್ಪಸ್ ಅನ್ನು ರಚಿಸಲಾಗುತ್ತದೆ. ಪಿಎಫ್ ಮೂಲಕ ನಿವೃತ್ತಿ ನಿಧಿಯನ್ನು ನಿರ್ಮಿಸುವುದು ಮಾತ್ರವಲ್ಲ ಇದರ ಹೊರತಾಗಿಯೂ EPFನಿಂದ ಹಲವು ಪ್ರಯೋಜನ ಪಡೆಯಬಹುದು. ಇಪಿಎಫ್ ಖಾತೆ ಹೊಂದಿರುವ ಬಹುತೇಕ ಉದ್ಯೋಗಿಗಳಿಗೆ ಇದರ ಸಂಪೂರ್ಣ ಪ್ರಯೋಜನಗಳ ಜ್ಞಾನವೇ ಇರುವುದಿಲ್ಲ. ಈ ಲೇಖನದಲ್ಲಿ ಪಿಎಫ್‌ ಖಾತೆದಾರರಿಗೆ ಇರುವ ಹಲವಾರು ಪ್ರಯೋಜನಗಳ ಮಾಹಿತಿ ಇದೆ.

click the image to apply
1. ಪಿಂಚಣಿ ಪ್ರಯೋಜನ
ಪಿಎಫ್‌ ಖಾತೆಯಲ್ಲಿ ನಿಮ್ಮ ಹಣವನ್ನು ಎರಡು ಭಾಗಗಳಲ್ಲಿ ಠೇವಣಿ ಮಾಡಲಾಗುತ್ತದೆ. ಒಂದು ಇಪಿಎಫ್ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇನ್ನೊಂದು ಇಪಿಎಸ್ ಅಂದರೆ ಉದ್ಯೋಗಿಗಳ ಪಿಂಚಣಿ ಯೋಜನೆ. ನಿಮ್ಮ ವೇತನದಿಂದ ಶೇ.12ರಷ್ಟು ಹಣ ಕಡಿತಗೊಳಿಸಿದರೆ, ಅಷ್ಟೇ ಮೊತ್ತದ ಹಣವನ್ನು ಕಂಪನಿಯು ಪಾವತಿಸುತ್ತದೆ. ಪಿಂಚಣಿ ಕಾರ್ಪಸ್ ಅನ್ನು ಕಂಪನಿಯ ಕೊಡುಗೆಯಿಂದ ರಚಿಸಲಾಗುತ್ತದೆ. ಆದರೆ 58 ವರ್ಷ ದಾಟಿದ ನಂತರವಷ್ಟೇ ಪಿಂಚಣಿ ಪ್ರಯೋಜನ ಸಿಗುತ್ತದೆ. ಇದಕ್ಕಾಗಿ ನೀವು ಕನಿಷ್ಟ 10 ವರ್ಷಗಳ ಕಾಲ ಕೆಲಸ ಮಾಡಿರಬೇಕು.

2. ನಾಮಿನಿಗೆ ಸಿಗಲಿದೆ ಪ್ರಯೋಜನ

ಪಿಎಫ್‌ ಖಾತೆಗೆ ಕೂಡ ನಾಮಿನೇಷನ್‌ ಮಾಡಬೇಕು. ಈ ಕುರಿತು EPFO ಪದೇ ಪದೇ ಚಂದಾದಾರರಿಗೆ ಸೂಚಿಸುತ್ತದೆ. ನಿಮ್ಮ EPF ಖಾತೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾರನ್ನು ಬೇಕಾದರೂ ನಾಮಿನೇಷನ್‌ ಮಾಡಬಹುದು. ಒಂದು ವೇಳೆ ಚಂದಾದಾರರು ಮೃತಪಟ್ಟರೆ ಆಗ ನಾಮಿನಿಗೆ ಪಿಎಫ್ ಹಣ ಸಿಗುತ್ತದೆ.
click image to apply



3.VPFನಲ್ಲಿ ಕೂಡ ಹೂಡಿಕೆ ಮಾಡಬಹುದು

ಇಪಿಎಫ್ ಹೊರತುಪಡಿಸಿ , ಉದ್ಯೋಗಿಗಳು ಸ್ವಯಂಪ್ರೇರಿತ ಭವಿಷ್ಯ ನಿಧಿಯಲ್ಲಿ (Voluntary Provident Fund) ಹೂಡಿಕೆ ಮಾಡಬಹುದು. ಅಂದರೆ ವಿಪಿಎಫ್ . ನಿಮ್ಮ ಮೂಲ ವೇತನದಿಂದ ನೀವು VPFಗೆ ಹೆಚ್ಚುವರಿ ಕೊಡುಗೆಯನ್ನು ನೀಡಬಹುದು.

4. ಹಣ ಹಿಂಪಡೆಯಲು ಹಲವು ನಿಯಮಗಳಿವೆ

ಇಪಿಎಫ್‌ನಿಂದ ಹಣ ಹಿಂಪಡೆಯಲು ಹಲವಾರು ನಿಯಮಗಳಿವೆ. ನೀವು ನಿಮ್ಮ ಉದ್ಯೋಗವನ್ನು ಬದಲಾಯಿಸಿದರೆ ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವುದು ಅಷ್ಟು ಸುಲಭವಲ್ಲ. ನಿಮ್ಮ ಹಿಂದಿನ ಕೆಲಸ ಬಿಟ್ಟ ಎರಡು ತಿಂಗಳ ಕಾಲ ಬೇರೆ ಯಾವುದೇ ಕೆಲಸಕ್ಕೆ ಸೇರದಿದ್ದರೆ ಮಾತ್ರ ಇಪಿಎಫ್ ಹಣವನ್ನು ಹಿಂಪಡೆಯಬಹುದು. ಅಲ್ಲದೆ ಹೊಸ ಉದ್ಯೋಗ ಪಡೆದ ನಂತರ ಮೊತ್ತವನ್ನು ವರ್ಗಾಯಿಸಬಹುದು.
click the image to apply
5. ಭಾಗಶಃ ಮೊತ್ತ ಪಡೆಯಲು ಅವಕಾಶವಿದೆ
ಇದಲ್ಲದೇ ಇಪಿಎಫ್ ಹಿಂಪಡೆಯಲು ಪ್ರತ್ಯೇಕ ನಿಯಮಗಳಿವೆ. ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಇಲ್ಲಿ ಸಾಧ್ಯವಾಗುವುದಿಲ್ಲ. ಆದರೆ ನಿರ್ದಿಷ್ಟ ಮಿತಿಯವರೆಗೆ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ನಿಮಗಾಗಿ, ನಿಮ್ಮ ಒಡಹುಟ್ಟಿದವರಿಗಾಗಿ ಮತ್ತು ನಿಮ್ಮ ಮಕ್ಕಳ ಮದುವೆ ಅಥವಾ ಶಿಕ್ಷಣಕ್ಕಾಗಿ ನೀವು ಹಣವನ್ನು ಹಿಂತೆಗೆದುಕೊಳ್ಳಬಹುದು. ಆದರೆ ಖಾತೆ ತೆರೆದ 7 ವರ್ಷಗಳ ನಂತರ, ಶೇ.50 ರಷ್ಟು ಮೊತ್ತವನ್ನು ಹಿಂಪಡೆಯಬಹುದು.

ಇದರ ಹೊರತಾಗಿ ನೀವು ಅಥವಾ ನಿಮ್ಮ ಕುಟುಂಬದ ಯಾರಿಗಾದರೂ ಪ್ರಮುಖ ಶಸ್ತ್ರಚಿಕಿತ್ಸೆ ಅಥವಾ ಇತರ ಚಿಕಿತ್ಸೆಗಾಗಿ ಹಣವನ್ನು ಹಿಂಪಡೆಯಬಹುದು. ಗೃಹ ಸಾಲವನ್ನು ತೀರಿಸಲು, ಮನೆ ನಿರ್ಮಿಸಲು ಅಥವಾ ಖರೀದಿಸಲು ಅಥವಾ ಮನೆಯನ್ನು ನವೀಕರಿಸಲು ನೀವು ಹಣವನ್ನು ಸಾಲ ಪಡೆಯಬಹುದು.

6. ಇಪಿಎಫ್ ಮೇಲಿನ ಬಡ್ಡಿ

ನೀವು ಇಪಿಎಫ್‌ನಲ್ಲಿ ಪ್ರತಿ ವರ್ಷ ಬಡ್ಡಿಯಾಗಿ ನಿಗದಿತ ಮೊತ್ತವನ್ನು ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ. ಹೀಗಾಗಿ ನಿಮ್ಮ ಹಣ ಬೆಳೆಯುತ್ತಲೇ ಇರುತ್ತದೆ. ಪ್ರಸ್ತುತ ಸರ್ಕಾರವು PF ಚಂದಾದಾರರಿಗೆ 8.15% ದರದಲ್ಲಿ EPF ಮೇಲೆ ವಾರ್ಷಿಕ ಬಡ್ಡಿ ನೀಡುತ್ತದೆ. ಆದರೆ, ಇಪಿಎಸ್ ಕಾರ್ಪಸ್‌ನಲ್ಲಿ ಯಾವುದೇ ಆದಾಯ ಇರುವುದಿಲ್ಲ. ಇದರಲ್ಲಿ ನೀವು ಠೇವಣಿ ಇಡುವ ಮೊತ್ತವನ್ನು ಮಾತ್ರ ಪಡೆಯುತ್ತೀರಿ.

7. ಜೀವ ವಿಮೆ ಸೌಲಭ್ಯ

ಕಂಪನಿಯು ಜೀವ ವಿಮಾ ಪ್ರಯೋಜನವನ್ನು ಹೊಂದಿಲ್ಲದಿದ್ದರೆ, ಅದರ ಉದ್ಯೋಗಿಗಳಿಗೆ EDLI (ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್) ಯೋಜನೆಯ ಅಡಿಯಲ್ಲಿ ಜೀವ ವಿಮೆಯನ್ನು ಒದಗಿಸಬಹುದು.


Post a Comment

Previous Post Next Post