EPFO : ಇಪಿಎಫ್‌ಒದಲ್ಲಿ ಇನ್ಮುಂದೆ ಜನ್ಮ ದಿನಾಂಕವನ್ನು ಅಪ್‌ಡೇಟ್ ಮಾಡಲು ಆಧಾರ್‌ ಕಾರ್ಡ್‌ ಸ್ವೀಕರಿಸುವುದಿಲ್ಲ! ಕಾರಣ ಏನು?

 

Date of Birth Update In EPFO : ಇಪಿಎಫ್‌ಒದಲ್ಲಿ ಇನ್ಮುಂದೆ ನೀವು ಜನ್ಮ ದಿನಾಂಕವನ್ನು ಅಪ್‌ಡೇಟ್ ಮಾಡಲು ಆಧಾರ್‌ ಕಾರ್ಡ್‌ ಅನ್ನು ನೀಡಿದ್ರೆ ಕೆಲಸ ಆಗೋದಿಲ್ಲ. ಈ ಹಿಂದೆ ಆಧಾರ್ ಕಾರ್ಡ್‌ ಲಗತ್ತಿಸುವ ಮೂಲಕ ಜನ್ಮ ದಿನಾಂಕವನ್ನು ಅಪ್‌ಡೇಟ್ ಮಾಡಬಹುದಿತ್ತು. ಆದ್ರೆ ಇನ್ಮುಂದೆ ಈ ದಾಖಲೆಯನ್ನು ಇಪಿಎಫ್‌ಒ ಪರಿಗಣಿಸುವುದಿಲ್ಲ. ಇದಕ್ಕೆ ಕಾರಣ ಏನು? ಬೇರೆ ಯಾವ ದಾಖಲೆ ಮೂಲಕ ಜನ್ಮ ದಿನಾಂಕವನ್ನು ಅಪ್‌ಡೇಟ್ ಮಾಡಬಹುದು ಎಂದು ಇಲ್ಲಿ ತಿಳಿಯಿರಿ


click the image to apply
ಹೈಲೈಟ್ಸ್‌:
  • ಇಪಿಎಫ್‌ಒ ಸದಸ್ಯರು ಜನ್ಮ ದಿನಾಂಕವನ್ನು ಅಪ್‌ಡೇಟ್‌ ಮಾಡಲು ಆಧಾರ್‌ ಕಾರ್ಡ್‌ ನೀಡುವಂತಿಲ್ಲ
  • ಈ ಹಿಂದೆ ಇದ್ದಂತಹ ಆಧಾರ್ ಕಾರ್ಡ್‌ ದಾಖಲೆಯನ್ನು ಲಗತ್ತಿಸುವ ಮೂಲಕ ಜನ್ಮ ದಿನಾಂಕವನ್ನು ಅಪ್‌ಡೇಟ್ ಮಾಡಲಾಗುತ್ತಿತ್ತು
  • ಇಪಿಎಫ್‌ಒ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ, ಜನ್ಮ ದಿನಾಂಕ್ ಅಪ್‌ಡೇಟ್‌ ಮಾಡಲು ಆಧಾರ್ ಕಾರ್ಡ್ ಸ್ವೀಕರಿಸುವುದಿಲ್ಲ

ನೀವು ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವಾಗ ಆ ಸಂಸ್ಥೆಯು ನಿಮ್ಮ ವೇತನಕ್ಕೆ ಅನುಗುಣವಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಅನ್ನು ಇಪಿಎಫ್‌ಒನಲ್ಲಿ ಠೇವಣಿ ಮಾಡುತ್ತವೆ. ಇದು ಕೂಡ ಒಂದು ರೀತಿಯ ಹೂಡಿಕೆಯ ಆಯ್ಕೆಯಾಗಿದೆ. ಇದಲ್ಲದೆ, ನಿವೃತ್ತಿ ಅಥವಾ ಯಾವುದೇ ಪ್ರಮುಖ ಕೆಲಸಕ್ಕಾಗಿ ಈ ನಿಧಿಯಿಂದ ಹಣವನ್ನು ಹಿಂಪಡೆಯಬಹುದು. ಆದ್ರೆ ಇಪಿಎಫ್‌ಒ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆಯ ಪ್ರಕಾರ, ಈಗ ಆಧಾರ್ ಕಾರ್ಡ್ ಅನ್ನು ಜನ್ಮ ದಿನಾಂಕವನ್ನು ಅಪ್‌ಡೇಟ್ ಮಾಡಲು ಬಳಸಲಾಗುವುದಿಲ್ಲ. ವಾಸ್ತವವಾಗಿ, ಜನ್ಮ ದಿನಾಂಕದ ಅಪ್‌ಡೇಟ್‌ಗಾಗಿ ಈ ಹಿಂದೆ ಆಧಾರ್ ಕಾರ್ಡ್ ಅನ್ನು ಲಗತ್ತಿಸಬೇಕಾಗಿತ್ತು, ಆದರೆ ಈಗ ಅದನ್ನು ಸ್ವೀಕರಿಸಲಾಗುವುದಿಲ್ಲ


ಯುಐಎಡಿಎ ನಿಂದ ಸುತ್ತೋಲೆ ಹೊರಬಂದಿದೆ

ಆಧಾರ್ ವಿತರಣಾ ಸಂಸ್ಥೆ ಅಂದರೆ ಯುಐಡಿಎಐನಿಂದ ಪತ್ರ ಬಂದಿದೆ ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಜನ್ಮ ದಿನಾಂಕದ ಪ್ರಮಾಣಪತ್ರವಾಗಿ ಸ್ವೀಕರಿಸಿದ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಬೇಕು ಎಂದು ಈ ಪತ್ರದಲ್ಲಿ ಹೇಳಲಾಗಿದೆ. ಇದರ ನಂತರವೇ ಇಪಿಎಫ್‌ಒ ಡಾಕ್ಯುಮೆಂಟ್ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಿದೆ.

ಜನ್ಮ ದಿನಾಂಕವನ್ನು ನವೀಕರಿಸಲು ಯಾವೆಲ್ಲಾ ಡಾಕ್ಯುಮೆಂಟ್ ಅಗತ್ಯವಿದೆ?

ನೀವು EPFO ನಲ್ಲಿ ಜನ್ಮ ದಿನಾಂಕವನ್ನು ನವೀಕರಿಸಲು ಬಯಸಿದರೆ, ಅದಕ್ಕಾಗಿ ನೀವು ಈ ದಾಖಲೆಗಳನ್ನು ಲಗತ್ತಿಸಬಹುದು.

ಹುಟ್ಟಿದ ದಿನಾಂಕವನ್ನು ನವೀಕರಿಸಲು ಈ ಮೇಲ್ಕಂಡ ಯಾವುದೇ ದಾಖಲೆಯನ್ನು ಹೊಂದಿಲ್ಲದಿದ್ದರೆ, ನಂತರ ಅವರು ವೈದ್ಯಕೀಯ ಪ್ರಮಾಣಪತ್ರದ ಮೂಲಕ ಜನ್ಮ ದಿನಾಂಕವನ್ನು ನವೀಕರಿಸಬಹುದು.

Post a Comment

Previous Post Next Post