ಹೊಸ ಉದ್ಯಮ ಆರಂಭಿಸಿದ್ದೀರಾ? ಹಾಗಾದರೆ ರಿಜಿಸ್ಟರ್‌ ಮಾಡುವುದನ್ನು ಮರೆಯದಿರಿ

 ನೀವು ಹೊಸ ಉದ್ಯಮ ಆರಂಭಿಸಿದ್ದೀರಿ ಎಂದಾದರೆ ಎಂಎಸ್‌ಎಂಇ

 ಕಾಯಿದೆಯಡಿ (MSME Act) ನೋಂದಣಿ ಮಾಡಿಕೊಳ್ಳವುದನ್ನು ಮರೆಯದಿರಿ.

 ನೋಂದಣಿ ಮಾಡಿಸುವುದರಿಂದ ಹಣಕಾಸು ನೆರವು ಸೇರಿದಂತೆ ಹಲವು

 ಸರ್ಕಾರಿ ಸೌಲಭ್ಯ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ಉದ್ಯಮಗಳನ್ನು

 ನೋಂದಣಿ ಮಾಡುವುದು ಹೇಗೆಂಬ ವಿವರ ಇಲ್ಲಿದೆ.

ಭಾರತದ ಆರ್ಥಿಕತೆಯಲ್ಲಿ ಸಣ್ಣ ಉದ್ದಿಗಳ ಪಾತ್ರ ಮಹತ್ವಪೂರ್ಣವಾದುದು. ಸಣ್ಣ ಉದ್ದಿಮೆಗಳೆಂದ ಮಾತ್ರಕ್ಕೆ ಅವುಗಳ ನಿರ್ವಹಣೆ ಸಲಭ ಎಂದೇನಲ್ಲ. ನೀವು ಸಣ್ಣ ಉದ್ದಿಮೆಯ ಮಾಲೀಕರಾಗಿದ್ದರೆ, ದಿನನಿತ್ಯದ ವಹಿವಾಟು ನಿರ್ವಹಿಸುವುದು ಸವಾಲಿನ ಕೆಲಸವೇ ಸರಿ. ಹಣದ ಹರಿವು, ಆದಾಯ-ನಷ್ಟ ಈ ಎಲ್ಲದರ ಮೇಲೂ ಗಮನ ಇಟ್ಟಿರಲೇ ಬೇಕು. ಆದರೆ, ನೀವು ಹೊಸ ಉದ್ಯಮ ಆರಂಭಿಸಿದ್ದೀರಿ ಎಂದಾದರೆ ಎಂಎಸ್‌ಎಂಇ ಕಾಯಿದೆಯಡಿ (MSME Act) ನೋಂದಣಿ ಮಾಡಿಕೊಳ್ಳವುದನ್ನು ಮರೆಯದಿರಿ. ಅದರಲ್ಲೂ ಉತ್ಪಾದನಾ ಕ್ಷೇತ್ರ ಮತ್ತು ಸೇವಾ ರಂಗಕ್ಕೆ ಸಂಬಂಧಿಸಿದ ಉದ್ಯಮವಾದರೆ ತಪ್ಪದೇ ನೋಂದಣಿ ಮಾಡಿಸಿಕೊಳ್ಳಿ. ಏಕೆಂದರೆ, ನೋಂದಣಿ ಮಾಡಿಸುವುದರಿಂದ ಹಣಕಾಸು ನೆರವು ಸೇರಿದಂತೆ ಹಲವು ಸರ್ಕಾರಿ ಸೌಲಭ್ಯ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಸಣ್ಣ ಉದ್ಯಮಗಳನ್ನು ನೋಂದಣಿ ಮಾಡುವುದು ಹೇಗೆಂಬ ವಿವರ ಇಲ್ಲಿದೆ.

ಎಂಎಸ್‌ಎಂಇ ಎಂದರೇನು?
ಎಂಎಸ್‌ಎಂಇ (MSME) ಎಂದರೆ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಎಂದರ್ಥ. ಮೈಕ್ರೋ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಅಭಿವೃದ್ಧಿ ಕಾಯಿದೆಯಡಿ ಈ ಉದ್ಯಮಗಳನ್ನು ನೋಂದಣಿ ಮಾಡಲಾಗುತ್ತದೆ. ಈ ಕಾಯಿದೆಯಡಿ ಉತ್ಪಾದನಾ ಕ್ಷೇತ್ರ ಅಥವಾ ಸೇವಾ ವಲಯಗಳಲ್ಲಿ ವಹಿವಾಟು ನಡೆಸುವ MSME ಆಗಿ ನೋಂದಾಯಿಸಲು ಅವಕಾಶವಿದೆ. ಸಣ್ಣ ಉದ್ದಿಮೆಗಳ ನೋಂದಣಿಯನ್ನು ಇದುವರೆಗೆ ಕಡ್ಡಾಯ ಮಾಡಿಲ್ಲವಾದರೂ, ಎಂಎಸ್‌ಎಂಇ ಕಾಯಿದೆಯಡಿ ನೋಂದಣಿ ಮಾಡುವುದರಿಂದ ಹಲವು ಅನುಕೂಲಗಳಿವೆ.

ಏಕೆ ನೋಂದಣಿ ಮಾಡಬೇಕು?
ನಿಮ್ಮ ಉದ್ಯಮವನ್ನು ಎಂಎಸ್‌ಎಂಇ (MSME) ಕಾಯಿದೆಯಡಿ ನೋಂದಾಯಿಸಿದ್ದರೆ, ಮುದ್ರಾ ಯೋಜನೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ವ್ಯವಹಾರದ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಸಾಲ ಪಡೆಯಬಹುದು. ಬ್ಯಾಂಕುಗಳು ಹಾಗೂ ಬ್ಯಾಂಕೇತರ ಸಂಸ್ಥೆಗಳಲ್ಲಿ ಹಲವು ಯೋಜನೆಗಳಡಿ ಸಾಲ ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾಲದ ಯೋಜನೆಗಳನ್ನು ಆಯ್ಕೆ ಮಾಡಬಹುದು.

ಎಂಎಸ್‌ಎಂಇ ನೋಂದಣಿಗೆ ಅರ್ಹತೆಗಳೇನು?
ಉತ್ಪಾದನಾ ಕ್ಷೇತ್ರ ಅಥವಾ ಸೇವಾ ವಲಯಕ್ಕೆ ಸಂಬಂಧಿಸಿ ಯಾವುದೇ ಉದ್ಯಮದ ಮಾಲೀಕರಾಗಿರಬೇಕು. ಕಿರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಂಬಂಧಿಸಿದಂತೆ ಕೆಲವು ಸರಳ ಅರ್ಹತಾ ಮಾನದಂಡಗಳಿವೆ.
ಕಿರು ಉದ್ಯಮ : ಗರಿಷ್ಠ 1 ಕೋಟಿ ರೂಪಾಯಿ ಬಂಡವಾಳ ಹೊಂದಿರಬೇಕು, ಹಾಗೂ ವಾರ್ಷಿಕ 5 ಕೋಟಿ ರೂಪಾಯಿಯೊಳಗೆ ವಹಿವಾಟು ಹೊಂದಿರಬೇಕು.
ಸಣ್ಣ ಉದ್ಯಮ : ಗರಿಷ್ಠ 10 ಕೋಟಿ ರೂಪಾಯಿ ಬಂಡವಾಳ ಹೊಂದಿರಬೇಕು, ಹಾಗೂ ವಾರ್ಷಿಕ 50 ಕೋಟಿ ರೂಪಾಯಿಯೊಳಗೆ ವಹಿವಾಟು ಹೊಂದಿರಬೇಕು.
ಮಧ್ಯಮ ಉದ್ಯಮ : ಗರಿಷ್ಠ 50 ಕೋಟಿ ರೂಪಾಯಿ ಬಂಡವಾಳ ಹೊಂದಿರಬೇಕು, ಹಾಗೂ ವಾರ್ಷಿಕ 250 ಕೋಟಿ ರೂಪಾಯಿಯೊಳಗೆ ವಹಿವಾಟು ಹೊಂದಿರಬೇಕು.

ಎಂಎಸ್‌ಎಂಇ ನೋಂದಣಿಯ ಪ್ರಾಮುಖ್ಯತೆ
ಎಂಎಸ್‌ಎಂಇ ನೋಂದಣಿಯು ಮಧ್ಯಮ ಗಾತ್ರದ ಉದ್ಯಮಗಳನ್ನು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಾಗ ಮೂರು ವರ್ಗಗಳಾಗಿ ವಿಂಗಡಿಸುವ ಉದ್ದೇಶ ಹೊಂದಿದೆ. ಈ ಮೂಲಕ ಇವುಗಳಿಗೆ ಏಕರೂಪದ ಕಾನೂನು ಪ್ರಕ್ರಿಯೆ ರೂಪಿಸಲು ಸಹಾಯಕ. ಇದು ಸರ್ಕಾರಕ್ಕೆ ಆಡಳಿತಾತ್ಮಕ ಅನುಕೂಲವಾದರೆ, ಉದ್ದಿಮೆಗಳಿಗೂ ಕೂಡ ಹಲವು ಅನುಕೂಲಗಳಿವೆ.

  • ಕಿರು ಮತ್ತು ಸಣ್ಣ ಉದ್ಯಮಗಳು ಹಣಕಾಸು ನೆರವು ಪಡೆಯಬಹುದು
  • ಎಂಎಸ್‌ಎಂಇ ಯಲ್ಲಿ ನೋಂದಣಿಯಾದ ಉದ್ದಿಗಳಿಗೆ ತೆರಿಗೆ ರಿಯಾಯಿತಿ ಕೂಡ ಲಭ್ಯ
  • ಎಂಎಸ್‌ಎಂಇ ಸಾಲದ ಬಾಕಿಯನ್ನು ಮರುಪಾವತಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ರಕ್ಷಣೆ ಒದಗಿಸುತ್ತದೆ


ಕಡಿಮೆ ಬಡ್ಡಿದರದಲ್ಲಿ ಸಾಲ
MSME ಕಾಯಿದೆಯಡಿ ನೋಂದಾಯಿಸಲಾದ ಉದ್ದಿಮೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಿದೆ. ಹೀಗಾಗಿ ನಿಮ್ಮ ಉದ್ದಿಮೆಯನ್ನು MSME ಆಗಿ ನೋಂದಾಯಿಸಿಕೊಳ್ಳುವುದರಿಂದ ಸಾಲದ ಮೇಲಿನ ಬಿಡ್ಡಿಹೊರೆ ಕಡಿಮೆಯಾಗುತ್ತದೆ.

ಸಾಲ ಮರುಪಾವತಿಯ ವಿರುದ್ಧ ರಕ್ಷಣೆ
ಸಾಲದ ಬಾಕಿಯನ್ನು ಮರುಪಾವತಿಸಲು ವಿಫಲವಾದಲ್ಲಿ, ನೋಂದಾಯಿತ MSMEಗಳು ಸಾಲದ ಅವಧಿಯ ವಿಸ್ತರಣೆ ಮತ್ತು ಕಾನೂನು ಪ್ರಕ್ರಿಯೆಗಳ ಮನ್ನಾ ಮೊದಲಾದ ಕೆಲವು ವಿನಾಯಿತಿಗಳನ್ನು ಪಡೆಯಬಹುದು.

ಸಹಾಯಧನ
MSMEಯಲ್ಲಿ ನೋಂದಣಿಯಾದ ಉದ್ಯಮಗಳಿಗೆ ಸಹಾಯಧನ ಸೇರಿದಂತೆ ಹಲವು ರಿಯಾಯಿತಿಗಳು ಲಭ್ಯ. ಸರ್ಕಾರದಿಂದ ತೆರಿಗೆ, ಸುಂಕ ಮತ್ತು ಬಂಡವಾಳ ಸಬ್ಸಿಡಿಗಳನ್ನು ಕೂಡ ಪಡೆಯಬಹದು. ಹೆಚ್ಚುವರಿಯಾಗಿ, ಈ ಉದ್ಯಮಗಳು ನೇರ ತೆರಿಗೆಗಳ ವಿನಾಯಿತಿಗೂ ಅರ್ಹವಾಗಿವೆ.

ನೋಂದಣಿಗೆ ಬೇಕಾದ ದಾಖಲೆಗಳು

  • ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ
  • ಪಾಸ್‌ಪೋರ್ಟ್‌ ಅಳತೆಯ ಫೋಟೋ
  • ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸೆನ್ಸ್ ಮೊದಲಾದ ಕೆವೈಸಿ ದಾಖಲೆಗಳು
  • ಬ್ಯುಸಿನೆಸ್‌ ಇನ್‌ಕಾರ್ಪೊರೇಷನ್‌ ಪ್ರಮಾಣಪತ್ರ,
  • ಬ್ಯುಸಿನೆಸ್‌ ಪ್ಯಾನ್‌ ಕಾರ್ಡ್‌
  • ಆದಾಯದ ದಾಖಲೆ
  • ಕಳೆದ 6 ತಿಂಗಳ ಬ್ಯಾಂಕ್‌ ಸ್ಟೇಟ್‌ಮೆಂಟ್‌
  • ಬಾಡಿಗೆ ಅಥವಾ ಬೋಗ್ಯದ ಒಪ್ಪಂದಪತ್ರ
  • ಇತರೆ ಅಗತ್ಯ ದಾಖಲಾತಿಗಳು

ಎಂಎಸ್‌ಎಂಇ  ಆನ್‌ಲೈನ್‌ ಮೂಲಕನೋಂದಣಿಯಾಗಲು ಸಂಪರ್ಕಿಸಿ 9916444424

Follow us:  ಸಮೃದ್ಧಿ ಸರ್ಕಾರಿ ಯೋಜನೆಗಳು

ಸಮೃದ್ಧಿ ಸರ್ಕಾರಿ ಯೋಜನೆಗಳ ವಾಟ್ಸಾಪ್ ಚಾನೆಲ್ ಲಿಂಕ್ ಕ್ಲಿಕ್ ಮಾಡಿ ಮತ್ತು ಫಾಲೋ ಮಾಡುವುದರ ಮೂಲಕ ಮುಂದಿನ ಎಲ್ಲಾ ಸರ್ಕಾರಿ ಯೋಜನೆಗಳ ಅಪ್ಡೇಟ್ಗಳನ್ನು ನಿಮ್ಮ ವಾಟ್ಸಪ್ ನಲ್ಲಿ ಪಡೆಯುವಿರಿ

https://whatsapp.com/channel/0029VaBikl8AojYyENk63p1O

ಸಮೃದ್ಧಿ ಸರ್ಕಾರಿ ಯೋಜನೆಗಳ ವೆಬ್ಸೈಟ್ ವೀಕ್ಷಿಸಿ

🌐 https://sarkariyojanegalu.blogspot.com/

ಸಮೃದ್ಧಿ ಸರ್ಕಾರಿ ಯೋಜನೆಗಳ ಯೂಟ್ಯೂಬ್ ಚಾನೆಲ್ ವೀಕ್ಷಿಸಿ

▶https://youtube.com/@Samrudhisarkariyojanegalu


A Group of Samrudhi Enterprises

Post a Comment

Previous Post Next Post