ಗರ್ಭಿಣಿ ಮಹಿಳೆಯರಿಗೆ ವರದಾನ ಈ ಪ್ರಧಾನ ಮಂತ್ರಿಮಾತೃ ವಂದನ ಯೋಜನೆ..! ಈ ಯೋಜನೆ ಬಗ್ಗೆ ಇಲ್ಲಿ ತಿಳಿಯಿರಿ
ಈ ಯೋಜನೆಗೆ ಯಾರು ಅರ್ಹರು:
* 19 ವರ್ಷದ ನಂತರ ಮದುವೆಯಾದ ಸ್ತ್ರೀ ಗರ್ಭಿಣಿ ಆದಾಗ ಯೋಜನೆಯ ಪ್ರಯೋಜನ ಪಡೆಯಬಹುದು
* ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಫಲಾನುಭವಿಗಳಾಗಿರುತ್ತಾರೆ.
ಬೆಂಗಳೂರು: 'ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆ' ಅಡಿಯಲ್ಲಿ, ಮೊದಲ ಬಾರಿಗೆ ಗರ್ಭಧರಿಸುವ ಮತ್ತು ಹಾಲುಣಿಸುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಯನ್ನು 'ಪ್ರಧಾನ ಮಂತ್ರಿ ಗರ್ಭಾವಸ್ಥೆಯ ಸಹಾಯ ಯೋಜನೆ' ಎಂದೂ ಕರೆಯಲಾಗುತ್ತದೆ.
ಮಾತೃವಂದನಾ ಯೋಜನೆ ಅಡಿ ಮೊದಲನೇ ಮಗುವಿಗೆ ಎರಡು ಕಂತುಗಳಲ್ಲಿ 5 ಸಾವಿರ ಹಣವನ್ನು ಹಾಗೂ ಎರಡನೇ ಹೆಣ್ಣು ಮಗುವಿಗೆ ಒಂದೇ ಕಂತಿ ನಲ್ಲಿ ಆರು ಸಾವಿರ ಹಣವನ್ನು ಪಡೆಯಬಹುದಾಗಿದೆ.
ತಾಯಿಯ ಆರೋಗ್ಯ ವರ್ಧನೆ ಹಾಗೂ ಪೂರಕ ಆಹಾರಕ್ಕಾಗಿ, ಆರೋಗ್ಯವಂತ ಮಗುವಿನ ಜನನಕ್ಕಾಗಿ ಸರ್ಕಾರದ ವತಿಯಿಂದ ನೀಡುವಂತಹ ಪ್ರೋತ್ಸಾಹ ಧನವಾಗಿರುತ್ತದೆ.ಈ ಮೊತ್ತವನ್ನು ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಯ ಆಧಾರ್ ನೋಂದಣಿಯಾದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದು.
ಈ ಸೌಲಭ್ಯವನ್ನು ಪಡೆಯಲು ಸರ್ಕಾರಿ ನೌಕರಳಲ್ಲದ ಗರ್ಭಿಣಿ ಮಹಿಳೆಯು ಅಂಗನವಾಡಿ ಕಾರ್ಯಕರ್ತೆಯನ್ನು 180 ದಿನಗಳೊಳಗೆ ಸಂಪರ್ಕಿಸಲು ಹಾಗೂ ಎರಡನೇ ಹೆಣ್ಣು ಮಗುವಿನ ಸೌಲಭ್ಯ ಪಡೆಯಲು ಮಗು ಜನಿಸಿದ ಮೂರು ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಬಹುದು.
ಅಂಗನವಾಡಿ ಕಾರ್ಯಕರ್ತೆಯರಿಗೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಪೋನ್ ಮುಖಾಂತರ ಸ್ಥಳದಲ್ಲೇ ಅರ್ಜಿ ನೋಂದಣಿ ಮಾಡಲಾಗುತ್ತದೆ. ಆ ದಿಸೆಯಲ್ಲಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆಯ ಮಾಹಿತಿಯ ಪ್ರತಿ, ಫಲಾನುಭವಿಗಳ ಆಧಾರ್ ಕಾರ್ಡ್ ಪ್ರತಿ, ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ನೋಂದಣಿ ಆಗಿರಬೇಕು.
ನೋಂದಣಿ (PMMVY) ಮಾಡಿಕೊಳ್ಳಲು ಬೇಕಾಗಿರುವ ದಾಖಲೆಗಳು ಯಾವುದು?;
* ಗರ್ಭಿಣಿಯರ ಆಧಾರ್ ಕಾರ್ಡ್
* ವಿಳಾಸದ ಪುರಾವೆ
* ಮಗು ಜನಿಸಿದ ನಂತರ ಜನನ ಪ್ರಮಾಣ ಪತ್ರ ಸಲ್ಲಿಸಬೇಕು
* ಬ್ಯಾಂಕ್ ಖಾತೆ ವಿವರ
* ಆದಾಯ ಪ್ರಮಾಣ ಪತ್ರ
* ಗರ್ಭಿಣಿ ಆಗಿರುವುದಕ್ಕೆ ಆಸ್ಪತ್ರೆಯಿಂದ ಸಿಕ್ಕ ದೃಢೀಕರಣ ಪ್ರಮಾಣ ಪತ್ರ
* ಬ್ಯಾಂಕ ಖಾತೆಯ ವಿವರ
* ಗರ್ಭಿಣಿ ಸ್ತ್ರೀಯ ಫೋಟೋ
ಆನ್ಲೈನ್ ಮೂಲಕ ಅರ್ಜಿ ಹಾಕಲು ಸಂಪರ್ಕಿಸಿ 9916444424, 9886741332
ಇಂತಹ ಸುದ್ದಿಗಳಿಗಾಗಿ ನಿಮ್ಮ ಹೆಸರನ್ನು ವಾಟ್ಸಪ್ ಗ್ರೂಪಿಗೆ ನೋಂದಾಯಿಸಿ 9916444424