ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ನಿವೃತ್ತಿಯ ನಂತರವೂ ಆದಾಯ ಗಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ, ಉದ್ಯೋಗಿ ತನ್ನ ಸಂಬಳದಿಂದ ಪ್ರತಿ ತಿಂಗಳು ಪಿಎಫ್ ಖಾತೆಗೆ ನಿಗದಿತ ಮೊತ್ತವನ್ನು ಜಮಾ ಮಾಡುತ್ತಾರೆ. ಇದು ನಿವೃತ್ತಿ ಉಳಿತಾಯ. ಇದನ್ನು ಟ್ರ್ಯಾಕ್ ಮಾಡಲು ನಿಮ್ಮ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. EPFO ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈಗ ಈ ಪ್ರಕ್ರಿಯೆ ಸುಲಭವಾಗಿದೆ.
ಉದ್ಯೋಗಿಯೊಂದಿಗೆ, ಕಂಪನಿಯು ಕೂಡ ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಯು ತನ್ನ ಪಾಲಿನ ಹಣ ನೀಡುತ್ತಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯು ಅನೇಕ ಬಾರಿ ಕೆಲಸ ಮಾಡುವವರ ಮನಸ್ಸಿನಲ್ಲಿ ಬರುತ್ತದೆ. ನಿಮ್ಮಲ್ಲೂ ಕೂಡ ಇಂತಹ ಅನುಮಾನವಿದ್ದರೆ ಅಥವಾ ನಿಮ್ಮ ಖಾತೆಯಲ್ಲಿ ಹಣ ಎಷ್ಟಿದೆ ಎಂದು ತಿಳಿಯಲು ಬಯಸಿದ್ದರೆ ಇಲ್ಲಿವೆ ಸರಳ ವಿಧಾನಗಳು. ನೀವು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದು.
ಪಿಎಫ್ ಬ್ಯಾಲೆನ್ಸ್ ಪರಿಶೀಲಿಲಿಸುವುದು ಹೇಗೆ?
ಉಮಂಗ್ ಆಪ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ
* ಪಿಎಫ್ ಬ್ಯಾಲೆನ್ಸ್ ತಿಳಿಯಲು ನಿಮಗೆ ನಿಮ್ಮ ಯುಎಎನ್ ಸಂಖ್ಯೆ ಗೊತ್ತಿರಬೇಕು.
* ನಿಮ್ಮ ಫೋನ್‌ನಲ್ಲಿ ಉಮಾಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
*ಇದರ ನಂತರ ನೀವು ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬೇಕು.
*ಈಗ ನಿಮ್ಮ UAN ಸಂಖ್ಯೆಯನ್ನು ಟೈಪ್ ಮಾಡಿ.
*ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ಹಾಕಿ.
* ಇದರ ನಂತರ ನೀವು ಅಪ್ಲಿಕೇಶನ್‌ನ ಬಲಭಾಗದಲ್ಲಿರುವ ಸದಸ್ಯರ ಐಡಿಯನ್ನು ಕ್ಲಿಕ್ ಮಾಡಬೇಕು.
*ಇ-ಪಾಸ್‌ಬುಕ್ ಅನ್ನು ಇಲ್ಲಿಂದ ಡೌನ್‌ಲೋಡ್ ಮಾಡಿಕೊಳ್ಳಿ.
* ಮೆಸೇಜ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ
ಮೆಸೇಜ್ ಮೂಲಕ ಬ್ಯಾಲೆನ್ಸ್ ಚೆಕ್ ಮಾಡಿ
ಇಪಿಎಫ್ಒ ಗ್ರಾಹಕರು ಸಂದೇಶದ ಮೂಲಕ ಪಿಎಫ್ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು. ಇದಕ್ಕಾಗಿ ನೀವು "EPFO UAN" ಎಂದು ಟೈಪ್ ಮಾಡಬೇಕು ಮತ್ತು ಅದನ್ನು 7738299899 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ಇಲ್ಲಿ ಭಾಷೆಯನ್ನು ಬದಲಾಯಿಸಿಕೊಳ್ಳುವ ಆಯ್ಕೆ ಕೂಡ ಇದೆ. ನೀವು ನಿಮ್ಮ ಭಾಷೆಯಲ್ಲಿ ಪಿಎಫ್ ಬ್ಯಾಲೆನ್ಸ್ ನೋಡಲು ಬಯಸಿದರೆ, ನೀವು ಬಯಸಿದ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಟೈಪ್ ಮಾಡಬೇಕು. ಅಂದರೆ, ನೀವು ಕನ್ನಡದಲ್ಲಿ ಮೆಸೇಜ್ ಬೇಕು ಎನ್ನುವುದಾದರೆ, EPFOHO UAN KAN ಎಂದು ಬರೆಯಬೇಕು ಮತ್ತು 7738299899 ಗೆ ಕಳುಹಿಸಬೇಕು.
ಮಿಸ್ಡ್ ಕಾಲ್ ಮೂಲಕ EPFO ಬ್ಯಾಲೆನ್ಸ್ ಚೆಕ್ ಮಾಡಿ
ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ನೀವು 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರ ನಂತರ ನೀವು EPFO ವಿವರಗಳನ್ನು ಪಡೆಯುವ ಮೆಸೇಜ್ ಬರುತ್ತದೆ. ಆದರೆ, ನಿಮ್ಮ UAN ಸಂಖ್ಯೆಯನ್ನು ನಿಮ್ಮ KYC ಗೆ ಲಿಂಕ್ ಮಾಡಿದರೆ ಮಾತ್ರ ನೀವು ಈ ಸೇವೆಯ ಪ್ರಯೋಜನ ಪಡೆಯಬಹುದು.
EPFO ಪೋರ್ಟಲ್‌ನಿಂದ ಬ್ಯಾಲೆನ್ಸ್ ಚೆಕ್ ಮಾಡಿ
* EPFO ಪೋರ್ಟಲ್‌ಗೆ ಹೋಗಿ ಮತ್ತು ಲಾಗ್ ಇನ್ ಮಾಡಿ.
* ಈಗ "ನಮ್ಮ ಸೇವೆಗಳು" ಎಂಬ ಆಪ್ಷನ್ ಕ್ಲಿಕ್ ಮಾಡಿ.
* ಇದರ ನಂತರ, ಡ್ರಾಪ್‌ಡೌನ್ ಮೆನುವಿನಿಂದ "ಉದ್ಯೋಗಿಗಳಿಗಾಗಿ" ಆಯ್ಕೆಯನ್ನು ಕ್ಲಿಕ್ ಮಾಡಿ.
* ಸೇವೆಯ ಒಳಗೆ ನೀವು "ಸದಸ್ಯ ಪಾಸ್‌ಬುಕ್" ಅನ್ನು ಕ್ಲಿಕ್ ಮಾಡಬೇಕು.
* ಈಗ ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
* ಇದರ ನಂತರ ನೀವು ಸರಿಯಾದ ವಿವರಗಳನ್ನು ಭರ್ತಿ ಮಾಡುವ ಮೂಲಕ ನಿಮ್ಮ ಇಪಿಎಫ್ ಖಾತೆಗೆ ಲಾಗ್ ಇನ್ ಆಗಬೇಕು.
* ಇದಾದ ನಂತರ ನಿಮ್ಮ PF ಪಾಸ್‌ಬುಕ್ ತೆಗೆದು PF ಬ್ಯಾಲೆನ್ಸ್ ಅನ್ನು ಸುಲಭವಾಗಿ ಚೆಕ್ ಮಾಡಬಹುದು.
📢ಕೆಲಸ ಖಾಲಿ ಇದೆ
🟢ಸಮೃದ್ಧಿ ಸೇವಾ ಕೇಂದ್ರ ಪ್ರಾಂಚಾಯಿಸಿ ತೆಗೆದುಕೊಳ್ಳ ಬಯಸುವವರು ಸಂಪರ್ಕಿಸಿ
👉ಯಾರಿಗೆಲ್ಲ ಆಸಕ್ತಿ ಇದೆಯೋ ಜಾಯಿನ್ ಆಗಿ
👉ಒಂದು ಗ್ರಾಮಕ್ಕೆ ಒಂದೇ ಪ್ರಾಂಚಾಯಿಸಿ ಕೊಡಲಾಗುವುದು
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಹಲವಾರು ಯೋಜನೆಗಳನ್ನು ಪ್ರಾಂಚಾಯಿಸಿ ಮೂಲಕ ಕೊಡಲಾಗುವುದು
🔴ಬೇಕಾಗಿದ್ದಾರೆ
✅ಮನೆಯಿಂದಲೇ ಕೆಲಸ ಮಾಡುವವರು
ಪಾರ್ಟ್ ಟೈಮ್ ಜಾಬ್ ಹುಡುಕುವವರು
ಫೀಲ್ಡ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುವವರು
✅ಪ್ರಾಂಚಾಯಿಸಿ ಮೂಲಕ ಕೆಲಸ ಮಾಡುವವರು
✅ಹೋಬಳಿ ಡಿಸ್ಟ್ರಿಬ್ಯೂಟರ್
✅ತಾಲೂಕು ಡಿಸ್ಟ್ರಿಬ್ಯೂಟರ್
✅ರಾಜ್ಯ ಮಟ್ಟದ ಡಿಸ್ಟ್ರಿಬ್ಯೂಟರ್
✅ಗ್ರಾಫಿಕ್ ಎಡಿಟರ್
✅ವಿಡಿಯೋ ಎಡಿಟರ್
✅ಕನ್ನಡದಲ್ಲಿ ಉತ್ತಮವಾಗಿ ಆಂಕರಿಂಗ್ ಮಾಡುವವರು
📍ರಾಜ್ಯದ ಎಲ್ಲೆಡೆ ಕೆಲಸ ಖಾಲಿ ಇದೆ
📲ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮಾಹಿತಿಯನ್ನು ಎಲ್ಲಾ ಗ್ರೂಪುಗಳಲ್ಲಿ ತಲುಪಿಸಿ
ಧನ್ಯವಾದಗಳು
🟢ಸಮೃದ್ಧಿ ಸೇವಾ ಕೇಂದ್ರ
🔗ಮೀಟಿಂಗ್ ಲಿಂಕ್ ಪಡೆಯಲು ನಿಮ್ಮ ಹೆಸರನ್ನು ವಾಟ್ಸಪ್ ಮಾಡಿ ಮತ್ತು ರಿಜಿಸ್ಟ್ರೇಷನ್ ಮಾಡಿಕೊಳ್ಳಿ📲 9900005849
ಮುಂದಿನ ಅಪ್ಡೇಟುಗಳನ್ನು ಪಡೆಯಲು ಫಾಲೋ ಮಾಡಿ
https://whatsapp.com/channel/0029VaiIvyw5kg7CRucmAM3h