ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ; NPS ಬದಲು ಸಿಗಲಿದೆ ಹಳೆಯ Pension ಸ್ಕೀಮ್ ಲಾಭ


 ನವದೆಹಲಿ : NPS and Old Pension System: ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಪಟ್ಟಂತೆ ಸರ್ಕಾರ ಪ್ರಕಟಣೆ ಹೊರಡಿಸಿದೆ.  ಸರ್ಕಾರಿ ನೌಕರರು  31 ಮೇ 2021 ರವರೆಗೆ ಹಳೆಯ ಪಿಂಚಣಿ ಯೋಜನೆಯ (OPS) ಲಾಭ ಪಡೆಯಬಹುದು. ಡಿಪಾರ್ಟ್ಮೆಂಟ್ ಆಫ್ ಪೆನ್ಷನ್ ಅಂಡ್ ಪೆನ್ಶನರ್ಸ್ ವೆಲ್ಫೇರ್ (DoPPW) ಅಧಿಸೂಚನೆಯ ಮೂಲಕ ಈ ಮಾಹಿತಿಯನ್ನು ನೀಡಿದೆ.

ಹಳೆಯ ಪಿಂಚಣಿ ಯೋಜನೆಗೆ ಮೇ 5 ರೊಳಗೆ ಅರ್ಜಿ ಸಲ್ಲಿಸಬಹುದು : 
ಇದರ ಲಾಭ ಪಡೆಯಲು ಬಯಸುವ ನೌಕರರು ಮೇ 5 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸದ ನೌಕರರು ರಾಷ್ಟ್ರೀಯ ಪಿಂಚಣಿ (NPS) ವ್ಯವಸ್ಥೆಯಿಂದ ಲಾಭ ಪಡೆಯುತ್ತಲೇ ಇರುತ್ತಾರೆ. 1 ಜನವರಿ 2004 ರಿಂದ 28 ಅಕ್ಟೋಬರ್ 2009 ರ ನಡುವೆ ನೇಮಕಗೊಂಡ ನೌಕರರಿಗೆ ಸಿಸಿಎಸ್ ಪಿಂಚಣಿ (CCS Pension) ಅಡಿಯಲ್ಲಿ ಮಾತ್ರ ಪಿಂಚಣಿ ಸೌಲಭ್ಯ ಸಿಗುತ್ತದೆ.

Post a Comment

Previous Post Next Post