ಉದ್ಯೋಗಿನಿ ಯೋಜನೆಯಡಿ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ, ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಆದಾಯ ಉತ್ಪನ್ನಕರ ಚುಟವಟಿಕೆಗಳಲ್ಲಿ ತೊಗಿಸಿಕೊಂಡು..


ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ, ಸರ್ಕಾರದ ಉದ್ಯೋಗಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರ ಆದಾಯ ಉತ್ಪನ್ನಕರ ಚುಟವಟಿಕೆಗಳಲ್ಲಿ ತೊಗಿಸಿಕೊಂಡು, ಸ್ವಯಂ ಉದ್ಯೋಗಿಗಳಾಗದಲು ಬ್ಯಾಂಕ್ ಮುಖಾಂತರ ಸಾಲ ಮತ್ತು ನಿಗಮದಿಂದ ಸಹಾಯಧನ ನೀಡಲು ಅರ್ಹ ಮಹಿಳೆಯರಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗಿದೆ.

ಘಟಕ ವೆಚ್ಚ ರೂ. 1 ಲಕ್ಷ ಮೇಲ್ಪಟ್ಟು ರೂ.5 ಲಕ್ಷದವರೆಗೆ, ಘಟಕ ವೆಚ್ಚದ ಹಾಗೂ ಸಹಾಯಧನ ಘಟಕ ವೆಚ್ಚ ಶೇ.70 ಅಥವಾ ಗರಿಷ್ಠ ರೂ.3.50 ಲಕ್ಷ ಬದಲಾಗಿ ಘಟಕ ವೆಚ್ಚ ರೂ. 1 ಲಕ್ಷ ಮೇಲ್ಪಟ್ಟು ರೂ. 3 ಲಕ್ಷದವರೆಗೆ ಇರುವ ಯೋಜನೆಗಳಲ್ಲಿ ನಿಗಮದಿಂದ ಸಹಾಯಧನವನ್ನು ಘಟಕ ವೆಚ್ಚ ಶೇ.50 ರಷ್ಟು ಅಥವಾ ಗರಿಷ್ಠ ರೂ.1.50 ಲಕ್ಷ ಸಹಾಯಧನ ನೀಡಿ ಉಳಿದ ವೆಚ್ಚವನ್ನು ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಾಜಿದೇವದಾಸಿಯರು ಹಾಗೂ ಅವರ ಹೆಣ್ಣು ಮಕ್ಕಳಿಗೆ, ದಮನಿತ ಮಹಿಳೆಯರು ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ನಡೆಯುತ್ತದೆ.

Post a Comment

Previous Post Next Post