ಗಂಗಾ ಕಲ್ಯಾಣ ಯೋಜನೆ

 

ಸಾಮೂಹಿಕ ನೀರಾವರಿ/ಏತ ನೀರಾವರಿ ಯೋಜನೆ:

ನದಿ ಮತ್ತು ನೈಸರ್ಗಿಕ ಹಳ್ಳಗಳ ಅಕ್ಕಪಕ್ಕದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳನ್ನು ಗುರುತಿಸಿ 8 ರಿಂದ 15 ಎಕರೆ ಹೊಂದಿರುವ ಗುಂಪು ಜಮೀನಿಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಪುರ್ಣ ಸಹಾಯಧನದೊಂದಿಗೆ ಏತ ನೀರಾವರಿ ಯೋಜನೆಯನ್ನು ಕೈಗೊಳ್ಳಲಾಗುವುದು. 8 ಎಕರೆ ಘಟಕಕ್ಕೆ ರೂ.2.53ಲಕ್ಷ ಹಾಗೂ 15 ಎಕರೆ ಘಟಕಕ್ಕೆ ರೂ.3.59ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿದೆ.

ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ:

ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಯನ್ನು 1984ರಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ 1½ ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಲೆನಾಡು ಪ್ರದೇಶಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ 1.00 ಎಕರೆ ಜಮೀನು ಹೊಂದಿರುವವರಿಗೂ ಸಹ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ.

ಈ ಯೋಜನೆಯಡಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು(ಗ್ರಾ), ಬೆಂಗಳೂರು(ನಗರ), ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕೆಳಗೆ ಕುಸಿದಿರುವುದರಿಂದ ಈ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.4.50 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರಲ್ಲಿ ರೂ.4.00 ಲಕ್ಷ ಸಹಾಯಧನವಿದ್ದು, ಉಳಿದ ರೂ.50,000/- ಅವಧಿಸಾಲವಾಗಿರುತ್ತದೆ. ಇತರೆ ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.3.50 ಲಕ್ಷ ನಿಗದಿಪಡಿಸಿದ್ದು, ಇದರಲ್ಲಿ ರೂ.3.00 ಲಕ್ಷ ಸಹಾಯಧನ ಮತ್ತು ರೂ.0.50 ಲಕ್ಷ ಅವಧಿಸಾಲವಾಗಿರುತ್ತದೆ. ಘಟಕ ವೆಚ್ಚದ ಪೈಕಿ ವಿದ್ಯುದ್ದೀಕರಣಕ್ಕೆ ಘಟಕ ವೆಚ್ಚದ ಸಹಾಯಧನದ ಮಿತಿಯಲ್ಲಿ ಪ್ರತಿ ಕೊಳವೆಬಾವಿಗೆ ರೂ.50,000/-ಗಳನ್ನು ಸಂಬಂಧಿಸಿದ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು.



Post a Comment

Previous Post Next Post