ಬೆಂಗಳೂರು ವಸತಿ ಯೋಜನೆ; ಅರ್ಜಿ ಸಲ್ಲಿಕೆಗೆ ಅರ್ಹತೆ ಏನು?
ಬೆಂಗಳೂರು, ಏಪ್ರಿಲ್ 01; ಬೆಂಗಳೂರು ನಗರದಲ್ಲಿ ಮನೆ ಮಾಡುವುದು ಹಲವಾರು ಜನರ ಕನಸು. ಇದಕ್ಕಾಗಿ 'ಬೆಂಗಳೂರು ವಸತಿ ಯೋಜನೆ' ರೂಪಿಸಲಾಗಿದೆ. ಆಸಕ್ತರು 30/4/2021 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ವಸತಿ ಸಚಿವ ವಿ. ಸೋಮಣ್ಣ ಅವರು ಫೇಸ್ ಬುಕ್ ಪೋಸ್ಟ್ ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅರ್ಹರು ಏಪ್ರಿಲ್ 30ರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದ್ದಾರೆ.
ಪ್ರತಿ ಘಟಕ (1ಬಿಎಚ್‌ಕೆ) ಮೊತ್ತ 10.6 ಲಕ್ಷ ರೂ.ಗಳು. 2.7 ಲಕ್ಷ ಸಹಾಯಧನ ಹೊರತುಪಡಿಸಿ ಬಾಕಿ ಮೊತ್ತ 7.9 ಲಕ್ಷ ರೂ.ಗಳು. ಮನೆ ಹಂಚಿಕೆಯಾದ ನಂತರ ರಾಜೀವ್ ಗಾಂಧಿ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಶೇ 25ರಷ್ಟು ಪಾವತಿ ಮಾಡಬೇಕು.
ಉಳಿದ ಹಣಕ್ಕೆ ಸಾಲ ಪಡೆಯಲು ಇಚ್ಚಿಸಿದಲ್ಲಿ ನಿಗಮದ ವತಿಯಿಂದ 15 ವರ್ಷಗಳಿಗೆ ಸಾಲ ನೀಡಲಾಗುತ್ತದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು ವೆಬ್ ಸೈಟ್‌ಗೆ ಭೇಟಿ ನೀಡಬಹುದು.
ಅರ್ಜಿಗಳನ್ನು ಸಲ್ಲಿಸುವವರ ವಾರ್ಷಿಕ ಆದಾಯ 3 ಲಕ್ಷ ಮೀರಿರಬಾರದು. ಕನಿಷ್ಠ 5 ವರ್ಷ ಬೆಂಗಳೂರು ನಗರ ಅಥವ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು